ಆಗದು ಸಾಧ್ಯವಾಗದು,
ನಿನ್ನ ಅಗಲಿ ಏನು ಮಾಡಲು ಆಗದು ಸಾಧ್ಯವಾಗದು,
ಯೇಸಯ್ಯ ಆಗದು ಸಾಧ್ಯವಾಗದು, ||ಆಗದು||
ದ್ರಾಕ್ಷಿ ಗಿಡವೆ ನಿನ್ ಬಳ್ಳಿಯು ನಾ (೨),
ನಿನ್ನಲ್ಲಿ ನೆಲಸಿ ನಿನಗಾಗಿ ಹರಡಿ, ಹೇರಳ ಫಲ ಕೊಡುವೆ (೨) ||ಆಗದು||
ಮಣ್ಣೊಂದಿಗೆ ನಾ ಬೆರೆತಿರುವೆ (೨),
ನಿನ್ನ ವಾಕ್ಯದಿಂದ ನನ್ನನ್ನು ಈಗಲೆ ಉಜ್ಜೀವಿಸ ಮಾಡಯ್ಯ (೨) ||ಆಗದು||
ಬಲ ನೀಡುವ ಕ್ರಿಸ್ತನಿಂದ (೨),
ಎಲ್ಲವ ಮಾಡಲು ಬಲ ಉಂಟು, ಎಲ್ಲವನ್ನು ಮಾಡುವೆನು (೨),
ಎಲ್ಲವನ್ನು ಮಾಡುವೆನು, ನಿನ್ ಬಲದಿ, ನಿನ್ ಕರದಿ,
ಎಲ್ಲವನ್ನು ಮಾಡುವೆನು, ಯೇಸಯ್ಯ ಎಲ್ಲವನ್ನು ಮಾಡುವೆನು