ಕೊಂಡಾಟ ಕೊಂಡಾಟವೇ
ನನ್ನ ಕರ್ತನ ಸನ್ನಿಧಾನದಿ
ಆನಂದ ಆನಂದವೇ
ನನ್ನ ಪ್ರಿಯನ ಪಾದದಲ್ಲಿ
ಪಾಪವೆಲ್ಲ ತೊಲಗಿತು ಶಾಪವೆಲ್ಲ ನೀಗಿತು
ಯೇಸುವಿನ ರಕ್ತದಿಂದ
ಕ್ರಿಸ್ತನಲ್ಲಿ ಜೀವನ ಕೃಪೆಯ ಜೀವನ
ಪರಿಶುದ್ಧ ಆತ್ಮನಿಂದ
ದೇವಾಧಿದೇವನು ಅನುದಿನವು ತಂಗುವ
ದೇವಾಲಯ ನಾನೇ
ಆತ್ಮನ ಮುದ್ರೆ ನನ್ಮೇಲೆ ಉಂಟು
ಅತಿಶಯ ಅತಿಶಯವೇ
ತುತ್ತೂರಿ ಶಬ್ಧ ದೂತರ ಸೈನ್ಯ
ಯೇಸು ಬರಲಿರುವಾ
ಕ್ಷಣಮಾತ್ರದಲ್ಲಿ ಮಾರ್ಪಟುಹೊಂದಿ
ಮಹಿಮೆಯ ಕಾಣುವೆವು
ಸರ್ವಶಕ್ತ ಯೇಸು ಜೀವಧಾರ ಯೇಸು
ಎಂದೆಂದು ಜಯನೀಡುವಾ
ಒಮ್ಮನಸ್ಸಿನಿಂದ ಹೋಸನ್ನ ಹಾಡಿ
ಊರಿಗೆಲ್ಲಾ ಸಾರೋಣ ಬಾ
Kondaata kondaatave
Nanna karthana sannidhanadhi
Aanandha aanandhave
Nanna priyana padhadhalli
Papavella tholagithu shapavella nigithu
Yesuvina rakthadinda
Kristhanalli jivana krupeya jivana
Parishuddha athmaninda
Dhevadhidhevanu anudhinavu thanguva
Dhevalaya naane
Athmana mudhre nanmele untu
Athishaya athishayave
Thuthuri Shabdha dhuthara sainya
Yesu baraliruva
Kshanamathradhalli marpatuhondhi
Mahimeya kanuvevu
Sarvashaktha yesu jivadhara yesu
Endendhu jayaniduva
Ommanassinindha hosanna haadi
Urigella saarona baa